Saturday, 19 December 2009


ಗೆಳೆಯ ಮಂಜು ಕವಿತೆ


ಒಂದು ಬೆಳಕಿನ ಪ್ರಭಾವಳಿ
ಹಲವು ಬಣ್ಣಗಳ ಬಿಂಬಿಸಿ
ಕಡು ಕತ್ತಲೆಯ ಪ್ರಜ್ವಲಿಸಿ
ಹೊಳೆದದ್ದೇ ಹೊಳೆದದ್ದು
ರೋಷ ವಿದ್ವೇಷಗಳ ಬರಿದು ಮಾಡಿ
ನೆಲಮುಗಿಲುಗಳ ಸಮ ಮಾಡಿ
ಕಣ್ಣು ಕಣ್ಣುಗಳಿಗಿಳಿದು
ಮೈಯನ್ನೇ ಸುಟ್ಟ ಬಣ್ಣ ಬೆಳಕಲ್ಲ
ಆಹ್ಲಾದಕರ ಕತ್ತಲು; ಕಡುಗಪ್ಪು;
ಸವಿಕಂಪು



Friday, 20 November 2009

ಹಸಿದ ಬೊಗಸೆಯ
ನಡುಕ ಬೆರಳುಗಳಿಂದ
ಜಾರದಿರಲಿ ಬದುಕು