Saturday 28 August, 2010

ಭುವಿಯ ಒಡಲ ಕೂಗು

ಜಗವೆಲ್ಲ ತುಂಬಿಹುವುದು

ನಡೆಸುವ ನಾವಿಕನಿಲ್ಲ

ಓಡುತಿವುದು ಬಂಡಿ 

ಚಿದ್ರಗೊಂಡ ರಭಸಕೆ.

ನೀ ಕರುಣಿಸಿದ ಜನರೆ

ಅಗೆ ಅಗೆದು 

ಬಗೆ ಬಗೆದು

ನಿನ್ನೊಡಲ ಕಣ ಕಣವನು 

ಕಿತ್ತು ತಿನ್ನುತಿಹರು

ನಿಂತು ಬಿಡು ಒಮ್ಮೆ

ನಶಿಸಿ ಹೋಗಲಿ ಮನುಕುಲವೆಲ್ಲ

ಅಲ್ಲಿ, 
ಕಾಡು ಮೇಡುಗಳು ಉಗಮಿಸಲಿ 

ದಾರಿ ದಾರಿಯೆ ಕಣ್ಮರೆಯಾಗಲಿ

ಅವನಳಿಸಿದ ಪ್ರಾಣಿ ಪಕ್ಷಿ ಸಂಕುಲಗಳೆಲ್ಲ 

ಮರು ಹುಟ್ಟಿ ಸಂಭ್ರಮಿಸಲಿ.

8 comments:

Dr.D.T.Krishna Murthy. said...

ಭಾವ ಪೂರ್ಣ ಕವನ.ಇಷ್ಟವಾಯ್ತು.

ಅನಂತ್ ರಾಜ್ said...

kavana chendavide.

ದಿನಕರ ಮೊಗೇರ said...

nimma kavanada aashaya chennaagide... adannu bareda reeti kooda chennaagide......
dhanyavaada olleya kavanakke,....

V.R.BHAT said...

Nice!

ಸೀತಾರಾಮ. ಕೆ. / SITARAM.K said...

ಮಾನವನ ದುರಾಸೆಗೆ ನಲುಗುತ್ತಿರುವ ಪರಿಸರದ ಕಾಳಜಿ ಬಗೆಗಿನ ತಮ್ಮ ವ್ಯಗ್ರತೆ ತೀಕ್ಷ್ಣವಾಗಿ ಮೂಡಿದೆ ಕವನದಲ್ಲಿ. ಇಷ್ಟವಾಯಿತು.

ಪ್ರಗತಿ ಹೆಗಡೆ said...

kavana chennagide... ishtavaytu...

Ashok.V.Shetty, Kodlady said...

Kavanada aashaya chennagide, idannu innu uttamagolisuva arhate nimmallide...innu uttamagolisbahudittu...Dhanyavadagalu...

© ಹರೀಶ್ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು