Thursday 13 May, 2010

ಹೂ ಮಡಕೆಯ ಜೋಗಿ ಪದ

ಮನಸ್ಸು ಮಾಗಿ ಕನವರಿಸಿ

ಬೆತ್ತಲೆ ಭೂಮಿಯೊಳಗಿಳಿದಾಗ

ಮಡಕೆಯೊಳಗಿನ ನೀರು ಇಂಗಿ

ಇಬ್ಬನಿಯ ಮಡಿಲು ಸೇರಿ

ಬೆಳಕ ತುಣುಕಿನ ದಾಹವ ತೀರಿಸಿ

ಮರೆಯಾಗುವುದರೊಳಗೆ

ಮಾಗಿಯ ಬಳ್ಳಿ ಕವಲೊಡೆದು

ಅರಳುವ ಹೂ ತಂಬೂರಿಯಾಗಿ

ಮಠ ಸೇರಿ

ಮೀಟಿದ ನಾದಕೆ

ಸಾಲು ಮಡಕೆಗಳ ಕನಸು ಚೂರಾಗಿ

ತನ್ನೊಡಲ ನೀರ ಹನಿಗಳು

ಜೋಗಯ್ಯನ ಪದಗಳಿಗೆ ತಲೆದೂಗಿ ತಾಳವಾದವು

1 comment:

ಮಂಜು said...

ಮನಸ್ಸು ಮಾಗಿ ಕನವರಿಸಿದ ಕನಸು ಚೂರಾಗಿದ್ದಾದರು ಯಾಕೆ? ಹರೀಶ್.
ಕನವರಿಕೆಯ ಸಾಕಾರ ರೂಪವೇ ಜೋಗಿ ಪದ ಅಲ್ಲವೇ. ಅಲ್ಲಿ hipocracy ಇರುವುದಿಲ್ಲ.
ಜೋಗಿ ಹಾಡಿನ ಗುಂಗು ನಮ್ಮನ್ನು ಸೂರೆಗೊಳ್ಳುವುದು ನಮ್ಮಿಂದ ನಮ್ಮನ್ನೇ ಕಸಿಯುವುದು ತನ್ನ ಇರುವಿಕೆಯಿಂದಲ್ಲ ತನ್ನ ಬರಿದಾಗುವಿಕೆಯಿಂದ.

-ಮಂಜು