Monday, 19 April 2010

ಪ್ರೀತಿ ಮೀಂಟುವ ಸೆಳೆತ

ಪ್ರೀತಿಯ ಹುಟ್ಟು

ಅವಳೊಲಿದ ಕ್ಷಣ

ಮುಗಿಲ ಮನವ ಗೆದ್ದಂತೆ

ನನ್ನೊಳಗೆ ಪರಿಮಳ

ಕಿರುನಗೆಯ ಕುಡಿನೋಟ

ಕಡು ಕತ್ತಲೆಯನು ಮೀಟಿ

ಒಡಲ ಕಣ್ಗಳ ಹೊಳಪಲಿ

ಮೂಡುತಿರುವ ಬೆಳದಿಂಗಳು




ಮುಂಜಾನೆಯ ಚುಮು ಚುಮು ಚಳಿ

ಚೆಲ್ಲಿದ ಎಳೆ ಬಿಸಿಲು

ಅರಳುತಿರುವ ಹೂವಿನ ಮುಗುಳ್ನಗೆಯು

ಸನಿಹಕೆ ಸೆಳೆದಂತಾಗುತಿದೆ

2 comments:

ಮಂಜು said...

ಪದ್ಯ ಚೆನ್ನಾಗಿದೆ ಹರೀಶ್.
ಬದುಕನ್ನು ಪ್ರೀತಿಯಿಂದಷ್ಟೆ ಬಣ್ಣಿಸಲು ಸಾಧ್ಯ

sridevi said...

ಜೀವನದಲ್ಲಿ ಪ್ರೀತಿ ಎಂಬುದು ಎಲ್ಲರಿಗೂ ಅವಶ್ಯಕ
ಪ್ರೀತಿ ಇಲ್ಲದಿದ್ರೆ ಬಾಳೆ ನರಕ.