Saturday, 15 May 2010

ಕನವರಿಕೆಯ ನಿಗಿ

ಸಾಗರದಾಚೆಯ ಕತ್ತಲೆಯ
ಸುಡುಕೆಂಡವು
ಅಲೆಗಳನ್ನೇರಿ  ಸುನಾಮಿಯಂತೆ
ಅತೀ ವೇಗದ ಕೆನ್ನಾಲಿಗೆಯು
ಇಡೀ ದ್ವೀಪವನ್ನೇ  ಆವರಿಸಿ
ಬೆಂಕಿ ಉಂಡೆಯಾಗಿ ಹಾರಿ
ನಮ್ಮೂರ ಕಾಡನು ಸುಟ್ಟು
ಜ್ವಾಲೆಯು ಛಾವಣಿಗೆ ತಾಕಿದೆಂದು
ಹೆದರಿ ಎಚ್ಚರಗೊಂಡಾಗ
ಅಜ್ಜವ್ವ ನಿರೋಲೆಗೆ ಬೆಂಕಿಯಂಟಿಸಿ
ಬೆಚ್ಚಗೆ
ಕೈ ಕಾಯಿಸುತ್ತಿದ್ದನ್ನು ಕಂಡು
ಕನಸು ಕನಸಾಗಿಯೇ ಉಳಿಯಲೆನ್ನುತ
ಅವ್ವನ ಮಡಿಲಲಿ ನಿದ್ರೆಗೆ ಜಾರಿದೆ.

1 comment:

ಮಂಜು said...

ಜಲ ಸಂಸ್ಕೃತಿಯನ್ನು ನೀವು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಚಿತ್ರಿಸಿದ್ದಾರೆ ನಿಮಗೆ ಅಗ್ನಿ ಮತ್ತು ಜಲದ ಸ೦ಘರ್ಷದ ಅನುಭಾವ ನಿದ್ರೆಯ ಪ್ರಪಾತಕ್ಕೆ ಬೀಳಲು ಬಿಡುತ್ತಿರಲಿಲ್ಲವೇನೋ-

-ಮಂಜು