Friday, 9 April, 2010

ಕಮ್ಮಾರನ ಕುಲುಮೆಯಲ್ಲಿ

ಕರಗಿದ ಖಡ್ಗವ

ಎಡೆಬಿಡದೆ

ಬಡಿದ ಏಟಿಗೆ

ಸುರಿದ ಬೆವರು

ಜೋಪಡಿಗೆ ಹರಿದಾಗ

ಸೂರಿನ ತೀರು ಚಿಗುರಿ

ಕುಲುಮೆಯ ಕಾವನು ತನ್ನದಾಗಿಸಿಕೊಂಡು

ತಂಪನೆರೆಯಿತು

1 comment:

spandana said...

ಬೆಂದ ಗರಿಯ ಚಿಗುರು - ಈ ಶೀರ್ಷಿಕೆ ನಿಜಕ್ಕೂ Unique ಆಗಿದೆ. ಆ ಶ್ರಮಜೀವಿಯ ಬವಣೆ ನೀಗಿಸಲು ಸೂರಿನ ತೀರು ಚಿಗುರಿ ತಂಪನೆರೆಯಿತು ಎಂಬ ನಿಮ್ಮ ಕಲ್ಪನೆ ತುಂಬಾನೆ ಚೆನ್ನಾಗಿದೆ. Its good. Keep up the good work

Sudha