Saturday 4 September, 2010

ನಿಶಬ್ಧ ಬೆಳಕು

ನನ್ನ ಒಲವನು 

ಒಡೆದ ಮಡಿಕೆ ಎಂದರು.

ನೆರೆ ಮನೆಯಲಿ 

ಮೊಟ್ಟೆ ಇಟ್ಟ ಹಕ್ಕಿ ಎಂದರು.

ಹಣ್ಣಿಲ್ಲದ ಮರದಂತೆ 

ನೀ.. ಬಂಜೆ ಎಂದರೂ...

ನೆರಳಿನ 

ಮಧುರ ಪ್ರೀತಿ 

ಮರೆಯಾಗುವುದೆ ?

5 comments:

ದಿನಕರ ಮೊಗೇರ said...

ಹರೀಶ್,
ತುಂಬಾ ಅರ್ಥವಿದೆ ಕವನಕ್ಕೆ..... ತುಂಬಾ ಚೆನ್ನಾಗಿದೆ.....

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಪ್ರಾಮಾಣಿಕವಾಗಿ ಹೇಳುತಿದ್ದೆನೆ, ಬೇಸರಿಸಬೇಡಿ-ಚಿತ್ರ ಮತ್ತು ಕವನ ಎರಡು ನನಗೆ ಅರ್ಥವಾಗಲಿಲ್ಲ.

© ಹರೀಶ್ said...

ದಿನಕರರ ಮೊಗೇರ ಹಾಗೂ ಸೀತಾರಾಮ್ ಸರ್ ರವರೆ ನಿಮ್ಮಗಳ ಪ್ರತಿಕ್ರಿಯೆಗೆ ಧನ್ಯವಾದಗಳು

ನನಗು ಒಂದೊಂದು ಸಾರಿ ಬೇರೆಯವರ ಕವನಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಕವಿಗಳ ಕವನದ ಪ್ರವೇಶವನ್ನು ಅರಿತುಕೊಳ್ಳುವಲ್ಲಿ ಸೋತಿದ್ದೇನೆ. ಆದರೆ ನನ್ನದೇ ಆದ ರೀತಿಯಲ್ಲಿ ಅದನ್ನು ಅರ್ಥ ಮಾಡಿಕೊಡ್ಡಿದ್ದೇನೆ. ಸೀತಾರಾಮ್ ಸರ್ ರವರೆ "ನಿಶಬ್ಧ ಬೆಳಕು" ನನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಾಗ ನನ್ನನ್ನು ಇದೇ ಸಮಾಜ ಹಿಯಾಳಿಸಿದ್ದರ ಪರಿ ಇದು. ನಿಮ್ಮ ಪ್ರತಿಕ್ರಿಯೆಯ ಬಗ್ಗೆ ಕೊಂಚವು ಬೇಸರವಿಲ್ಲ ಆಗಾಗ ಬರುತ್ತಿರಿ.

ಸೀತಾರಾಮ. ಕೆ. / SITARAM.K said...

ಅದ್ಭುತ ಕವನ -ಆದರೆ ನಿಶ್ಯಬ್ದ ಬೆಳಕು ಶಿರೋನಾಮೆ ಸ್ವಲ್ಪ ದಾರಿ ತಪ್ಪಿಸುತ್ತೆ. ಸೂಕ್ತ ಶೀರ್ಷಿಕೆಯಿಂದ ತಮ್ಮ ಕವನ ಚತ್ತೆಂದು ಹೊಳೆಯುವಂತೆ ಮಾಡಲಾಗದೆ?
ತಾವು ಹೇಳಿದ ಹಿನ್ನೆಲೆಯಲ್ಲಿ ಕವನ ತುಂಬಾ ಅರ್ಥವ್ಯಾಪ್ತಿಯಾಗಿದೆ.