Monday, 17 May 2010

ಚಂದಗಾಣು

ಮರವು ನೀ
ಬೇರು ನಾ
ಹಸಿರಿನ ಚಿಗುರು
ನೆರಳ ಉಡುಗೆಯ ತೊಟ್ಟು
ನೊಂದ ಹೃದಯಗಳಿಗೆ
ಆಸರೆಯ ನೀಡಿ
ಸುರಿದ ಮಳೆಗೆ
ಮನಸ್ಸುಗಳೆರಡು ತಿಳಿಗೊಂಡು
ಕಂಡುಕೊಂಡ ದಾರಿಯೆ
ನನ್ನ ನಿನ್ನಯ ಇಂದಿನ ಬದುಕು 

2 comments:

Unknown said...

ಎಲ್ಲಿ ಪ್ರೀತಿ ಇರುತ್ತೋ ಅದರ ಜೊತೆಯಲ್ಲಿ ನೋವು ಇರುವುದು ಸಹಜ, ನೀವಿಬ್ಬರು ಚಿಗುರೊಡೆದ ಮರವಾಗಿ ನೊಂದ ಹೃದಯಗಳಿಗೆ ಆಸರೆ ನೀಡುವುದಕ್ಕಿಂತ ನಿಮ್ಮ ಮುಂದಿನ ಕವನದ ಸಾಲುಗಳಲ್ಲಿ ನೈಜ ಪ್ರೀತಿ ಉಳ್ಳವರಿಗೆ ನೋವು ಅನ್ನುವ ಶಬ್ದ ಅವ್ರ ಮನಸಿಗೆ ಸುಳಿಯದಂತೆ ವರ್ಣಿಸುವುದು ಸೂಕ್ತ.ಇದು ನನ್ನ ಆಶಯ ಕೂಡ.


ರಾಜಯೋಗಿ

ಮಂಜು said...

ಮನಸ್ಸು ತಿಳಿಯಾಗಿರುವುದೇ ನೋವಿಲ್ಲದ ಸಾರಯುಕ್ತ ನೈಜ ಪ್ರೇಮದ ಸಂಕೇತವಲ್ಲವೇ ಯೋಗಾನ೦ದರವರೆ.

-ಮಂಜು