Saturday 19 June, 2010

ಮಣ್ಣೆಂಟೆಯೊಳು ತೆನೆ ಪೈರು

ಬಡತನದ ದೀವಿಗೆಯ ಹೊತ್ತು

ಕಾಮ ಕ್ರೋಧವನು ಕತ್ತಲೆಗೆ ದೂಡಿ

ಪೂಜೆ ಪುನಸ್ಕಾರವನು ಬದಿಗೊತ್ತಿ

ಬಿಸಿಲ ಧೂಳಲಿ ಕರೆ ಕಾಳ ಬಿತ್ತಲು

ಕುರಿಕೆಯ ಹಿಡಿದು ಹೊರಟ ಹಸಿ ಮೈ

ಜಡಿ ಮಳೆಗೆ ಬೆವರು ಸುರಿಸಿ,

ಮಣ್ಣೆಂಟೆ ಕಳೆಗಳನು ಬಡಿದು

ಬಡ ಬಗ್ಗರ ಬದುಕ ಕಟ್ಟಿ

ಮೊಳಕೆಯೊಡೆವ ಮೊದಲೆ

ತನ್ನಾಳುವ ಅರಸನ ಕೈಗೆ ಸಿಕ್ಕು

ಮೇಣಿಯ ಹಾಲನು ಕುಡಿದು

ನೇಗಿಲ ಯೋಗಿಯಾಗಿರುವೆ.

13 comments:

ಮನದಾಳದಿಂದ............ said...

ವ್ಹಾವ್..........
ಸುಂದರ ಕವನ........

Dr.D.T.Krishna Murthy. said...

ಸುಂದರ ಕವನ.ನನ್ನ ಬ್ಲಾಗಿಗೂ ಬನ್ನಿ.

ಸೀತಾರಾಮ. ಕೆ. / SITARAM.K said...

wah! nice!!!

ಜಲನಯನ said...

ಹರೀಶ್, ಅನ್ನದಾತನ ಕರ್ಮಕ್ರಮದ ಅತಿ ಸುಂದರ ಬಣ್ಣನೆ ಮತ್ತು ಅವನ ಬವಣೆಯ ಸೂಚ್ಯ ಭಾವ..ಹೊಮ್ಮಿದೆ ನಿಮ್ಮ ಕವನದಲ್ಲಿ....

© ಹರೀಶ್ said...

"ಮನದಾಳದಿಂದ"ಪ್ರವೀಣ್ ಆರ್ ಗೌಡರವರೆ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

© ಹರೀಶ್ said...

"ಕೊಳಲು" Dr.D.T.K.Murthy.ರವರೆ
ನಮಸ್ಕಾರ.ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮ್ಮ ಜೋಕು ಜೋಕಾಲಿ ಚನ್ನಾಗಿದೆ.

© ಹರೀಶ್ said...

"ಒ೦ಚೂರು ಅದು! ಇದು!" ಸೀತರಾಮ್ ರವರೆ, ಇಷ್ಟು ದೂರ ಬಂದು ಪ್ರತಿಕ್ರೆಯೆ ನೀಡಿದಕ್ಕೆ ದನ್ಯವಾದಗಳು.

ನಿಮ್ಮ ಗಂಡಅವಲಕ್ಕಿ ತುಂಬಾ ಪ್ರಚಾರದಲ್ಲಿದೆ.

© ಹರೀಶ್ said...

"ಜಲನಯನ" ಆಜಾದ್ ರವರೆ
"ಅನ್ನದಾತನ ಕರ್ಮಕ್ರಮದ ಅತಿ ಸುಂದರ ಬಣ್ಣನೆ ಮತ್ತು ಅವನ ಬವಣೆಯ ಸೂಚ್ಯ ಭಾವ" ಪ್ರತಿ ಕ್ರೀಯೆಗೆ ಧನ್ಯವಾದಗಳು

ನಾವೆಲ್ಲರೂ ಇಂದು ಬದುಕುತ್ತಿರುವುದು ರೈತರನ್ನು ಅವಲಭಿಸಿಯೇ ಅಲ್ಲವೇ

ಆಗಾಗ ಬೇಟಿ ಕೊಡಿ.

© ಹರೀಶ್ said...

"ನನ್ನದೇ ಲೋಕದಲ್ಲಿ" ವಸಂತ್ ರವರೆ ನಮಸ್ಕಾರ.ನಿಮಗೆ ನನ್ನ ಬ್ಲಾಗಿಗೆ ಸ್ವಾಗತ. ಹೀಗೆ ಬೇಟಿಕೊಟ್ಟು ನಿಮ್ಮ ಪ್ರತಿಕ್ರಿಯೆ ನೀಡುತ್ತಿರಿ.

Raghu said...

ಚೆನ್ನಾಗಿದೆ. ಹೀಗೆ ಬರೆಯುತ್ತೀರಿ.
ನಿಮ್ಮವ,
ರಾಘು.

ಪ್ರವೀಣ್ ಭಟ್ said...

annadatana bavane.. annadatana baduku.. kavanadalli chennagi moodide

Pravi

© ಹರೀಶ್ said...

ರಘು ರವರೆ ನಿಮಗೆ ಸ್ವಾಗತ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಹೀಗೆ ಬಂದು ನಿಮ್ಮ ಪ್ರತಿಕ್ರಿಯೆ ನೀಡುತ್ತಿರಿ.

© ಹರೀಶ್ said...

ಪ್ರವೀಣ್ ರವರೆ ನಿಮಗೆ ಸ್ವಾಗತ
ತುಂಬಾ ಧನ್ಯವಾಗಳು ನಿಮ್ಮ ಪ್ರತಿಕ್ರಿಯೆಗೆ.
ನಿಮ್ಮ ಸತ್ತ ಪ್ರೀತಿಗೊಂದು ಗೋರಿ ಚನ್ನಾಗಿದೆ.
ನಿಮ್ಮ ಪ್ರಿತಿಕ್ರಿಯೆ ನೀಡುತ್ತಿರಿ