Saturday 7 August, 2010

ದುಗುಡದ ಮನ

ಜೋಡಿ ಎತ್ತುಗಳು 
ದುರುಗುಟ್ಟಿ ನೋಡುತಿವೆ
ನಾ ಹೇಗೆ ತಿಳಿಯಲಿ 
ಅವು ನನ್ನ ತಿವಿಯುವುದಿಲ್ಲವೆಂದು ?


ಜೋಡಿ ಹಕ್ಕಿಗಳೆರಡು
ಗೂಡು ಬಿಟ್ಟು ಹಾರುತಿವೆ 
ನಾ ಹೇಗೆ ತಿಳಿಯಲಿ 
ಅವು ಮತ್ತೆ ಗೂಡು ಸೇರುತ್ತೇವೆಂದು ? 



ಕಾಣದ ಕೈಗಳೆರಡು
ಕತ್ತು ಹಿಸುಕುತ್ತಿವೆ 
ನಾ ಹೇಗೆ ತಿಳಿಯಲಿ 
ನಾ ಮತ್ತೆ ಬದುಕುತ್ತೇನೆಂದು ? 

ದುಗುಡದ ಮನವೆ ದೂರವಾಗು ನನ್ನಿಂದ 
ದೃಡನಾಗುವೆ ನಾ ಮಸಣದಲ್ಲೂ............

11 comments:

ಅನಂತ್ ರಾಜ್ said...

ದುಗುಡದ ಮನ ದೂರವಾಗಲಿ. ಚೆ೦ದವಿದೆ ಕವನ.

ಅನ೦ತ್

ಮನದಾಳದಿಂದ............ said...

ದುಗುಡದ ಮನ ದೂರಾದರೆ ಸದಾ ಆನಂದವೇ........!
ಚಂದದ ಕವನ......

Dr.D.T.Krishna Murthy. said...

ದುಗುಡ ದೂರಾಗಲಿ.ಆನಂದ ನಿಮದಾಗಲಿ.

Ittigecement said...

ಕವನದ ಭಾವಗಳು ಚೆನ್ನಾಗಿವೆ...

ಅಭಿನಂದನೆಗಳು...

V.R.BHAT said...

ದುಗುಡ ರಹಿತ ಜೀವನ ನಿಮಗೊದಗಲಿ! ಕವನ ಓಕೆ

ಸೀತಾರಾಮ. ಕೆ. / SITARAM.K said...

ಕೊನೆಯ ಸಾಲುಗಳು ಮನ ತಟ್ಟಿದ್ದವು!

ಪ್ರಗತಿ ಹೆಗಡೆ said...

ದುಗುಡದ ಮನವೆ ದೂರವಾಗು ನನ್ನಿಂದ
ದೃಡನಾಗುವೆ ನಾ ಮಸಣದಲ್ಲೂ...
ಇಷ್ಟವಾಯಿತು...

ಮನಮುಕ್ತಾ said...

ಕೊನೆಯ ಸಾಲುಗಳು ತು೦ಬಾ ಹಿಡಿಸಿದವು..ಚೆನ್ನಾಗಿ ಬರೆದಿದ್ದಿರಿ.

© ಹರೀಶ್ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

Ashok.V.Shetty, Kodlady said...

Duguda dooravaagali....tumbaa chennagide kavana...

sachin shetty said...

nice sir