ಉಳುವ ನೆಲವ ಮಾರಿ
ಜೋಪಡಿಯ ಬಿಟ್ಟು
ಕಲ್ಲು ಕಟ್ಟಡವ ಕಟ್ಟಿ
ಕಾಲು ದಾರಿಯ ಅಳಿಸಿ
ನುಣ್ಣನೆಯ ದಾರಿಯ ಬೆಳೆಸಿ
ವಿಷ ಗಾಳಿಯ ಕುಡಿದು
ಅನ್ನಕ್ಕಾಗಿ ಅಲೆಯುವ
ನಾವು
ಅಭಿವೃದ್ಧಿಹೊಂದಿದವರು
ಓ ದೊರೆಯೆ
ಅಜ್ಜ ಇಟ್ಟ ರಾಗಿಯ
ಭೂ ತಾಯಿಗೆ ಉಣಿಸಿ
ಜಟ್ಟಿಯಾಗಿದ್ದೇನೆ
ನೀನು ಕೊಡುವ ಕಾಳು ಕಡ್ಡಿಯ
ಬೆಳೆದು
ಶರಣಾಗಲಾರೆ
ಅದ ತಿಂದು
ನಾ
ನಪು:ಸಕನಾಗಲಾರೆ
ದಕ್ಕೆಯಾದ ಭಾವನೆಗಳಿಗೆ
ದಕ್ಕಲಿ
ಸುಮಧುರ ದಿನಗಳು
ಕಳಚದಿರಲಿ ಬಾಂಧವ್ಯದ ಬೆಸುಗೆಗಳು
ನವ ಚೈತನ್ಯ ತುಂಬುವ
ಹೊಸ ವರ್ಷದ ಸಂಭ್ರಮ
ಹರುಷವ ತರಲಿ
ವರುಷವೆಲ್ಲ ಇರಲಿ
ಯುದ್ದ ಎಂದರೆ
ನಾವು
ಹಿಗ್ಗಿವುದು ಅಲ್ಲ
ಕುಗ್ಗುವುದು ಅಲ್ಲ
ಸ್ಥೈರ್ಯ ಹೆಚ್ಚಿಸಿಕೊಳ್ಳುವುದು
ಅಲ್ಲ
ಅಂಧಕಾರದಲ್ಲಿ ಭುಗಿಲೆದ್ದ
ಕ್ರೌರ್ಯ
ಬೆಳ್ಳಿ ಬಂಗಾರ
ಆಗೊಂದು ಹೀಗೊಂದು ರೂಪ
ಕುಲುಮೆಯಲಿ
ಅಕ್ಕಸಾಲಿಗ ಉಳ್ಳವರಿಗೆ
ಮಡಿಕೆ ಕುಡಿಕೆಯ ಗಡಿಗೆ
ಸುಟ್ಟರೂ ಗುರಿಯೊಂದು
ತಣ್ಣಗಿರುವುದು
ಕುಂಬಾರ ದಣಿದ ದನಿಕನಿಗೆ